
ಶನಿವಾರ, ಆಗಸ್ಟ್ 22, 2009
ಶುಕ್ರವಾರ, ಜುಲೈ 10, 2009
ಭಾನುವಾರ, ಮೇ 17, 2009
ಏಳು
೧.ನಿನ್ನ ಕಣ್ಣ ಏಳು ಬಣ್ಣ
ಕನಸು ಬಲೆಗೆ ಬಿದ್ದೆ
ಏಳು ತಳದ ಅಳಕೆಲ್ಲೋ
ಕಳೆದು ಹೋಯ್ತು ನಿದ್ದೆ!
೨. ರೆಪ್ಪೆ ನೀನು ಬದಿದಲೆಲ್ಲಾ
ಏಳು ಅಲೆಯ ಹೊಡೆತ
ಸುಮ್ಮನೊಂದು ಹಾಸ ಹೊನಲು
ಏಳು ಸ್ವರದ ಮಿಳಿತ!
೩. ಏಳು ಕೋಟೆ ಮಿರಿ ಬಂತು
ಎದೆಯ ಇಂಚರ
ಕಳೆದು ಜೀವ ನಿನ್ನ ಸೆಳೆವ
ಹುಚ್ಚು ಕಾತರ
೪. ಏಳು ಕದಲಿನಾಚೆಗೆಲ್ಲೋ
ಸ್ವಪ್ನದ್ವೀಪ ಒಂದಿದೆ
ಎದೆಯ ಬಡಿತ ಎರವಲಾಗಿ
ಏಳು ಜನುಮ ಕಾದಿದೆ
ಬುಧವಾರ, ಮೇ 13, 2009
ಅಂತರಂಗ
ನಿನ್ನ ಸನ್ನಿಧಿಯ ಬಯಸಿ
ಕಡಲಿನಲೆ ಸೆಳೆವಂತೆ ಸುಳಿಯುತಿಹುದು.
ಕಾಡುಮೇಡುಗಳಲ್ಲಿ
ಹಕ್ಕಿಗೂಡುಗಳಲ್ಲಿ ಹಸಿರಾಗಿ
ಹಾಡಾಗಿ ಹೊಮ್ಮುತಿಹುದು.
ರಮ್ಯದಿಂ ಗಮ್ಯಕ್ಕೆ
ತಂತಿಯಂ ಶೃತಿಗೊಳಿಸಿ
ಶೂನ್ಯ ತಾರಕದೀ ಬೆರಳು ಸವೆಯುತಿಹುದು.
ಎದೆಯೊಡಲ ಗರ್ಭದಲಿ
ಭ್ರೂಣದಾಕೃತಿಯಲ್ಲಿ
ನಿನ್ನ ಮುಡಿಗೆಂದೇ ಹೂವೊಂದು ಅರಳುತಿಹುದು.
ಮಂಗಳವಾರ, ಮೇ 12, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)

