ಭಾನುವಾರ, ಸೆಪ್ಟೆಂಬರ್ 2, 2018

ಆಹಾ...



ಇಲ್ಲ..
ಇವಳನ್ನು ಯಾವ ಹೂವಿಗೋ
ಹಣ್ಣಿಗೋ, ಅಪ್ಸರೆಗೋ
ಹೋಲಿಸಲಾರೆ
ಅವಳೊಂದು
ಹೊಸ ಉಪಮೆ

ಮಾದಕ ಮೋಹಕವೆಂದು
ಮೈ ಮರೆಯಲಾರೆ
ಹೃದಯದ ದನಿಯೆಂದು
ಕವಿತೆ ಬರೆಯಲಾರೆ
ಉರಿವ ಮೈಯಲ್ಲ
ಸಿಗದ ಮನಸಲ್ಲ
ಎಂದೂ ಚ್ಯುತಿ ಇರದ
ಅಂತರಾತ್ಮವೇ ಅವಳು

ಪ್ರೀತಿ ಎಂಬುದು
ಅವರಿವರ ಮಾತಿನ ಹಳಸು ನಕಲು ನನ್ನ ಕವಿತೆಯಲ್ಲ

ನನ್ನದೋ ನಿನ್ನ
ತನುಮನದ ಹಂಗಿಲ್ಲದ
ಆತ್ಮಾನುಭಾವ

1 ಕಾಮೆಂಟ್‌:

sunaath ಹೇಳಿದರು...

ತುಂಬ ಚೆಲುವಾದ ಕವನ. ಪ್ರೀತಿಯ ನೈಜ ತಿಳಿವು.