ಶನಿವಾರ, ಸೆಪ್ಟೆಂಬರ್ 14, 2013

ನಾನೂತನಾನೂ

ಇಲ್ಲದಿದ್ದರಿರಲಾರದ
ಗುಣ
ಅಗಣಿತ
ಇದ್ದರೂ
ಇಲ್ಲದೇ
ಇರುವ
ನಿರ್ಗುಣ

ಕಾಣಲಾರದೇ
ಕತ್ತಲಾದ
ಬೆಳಕು

ಕಾಣಲೆಂದೇ
ಬೆಳಕಾದ
ಕತ್ತಲು

ನನ್ನ ನಾ
ನೋಡಲಾರದೆ
ನಿನ್ನ
ನೋಡುವೆ

ನಿನ್ನಲೇ
ಬೆರೆತು
ನನ್ನ
ಹುಡುಕುವೆ

ಹೂವೆ

ಬರಿದೆ ಅರಳುವೆ

ನಾನು
ನೀನು
ಆಗದೆ

ತಾನಾಗುವೆ

3 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಮೊದಲ ಮಾರ್ಕ್ಸು ನಿಮ್ಮ ಹೆಸರನು ಪೋಣಿಸಿದ ಶೀರ್ಷಿಕೆಗೆ. ಉಳಿದ ಅಷ್ಟೂ ಮಾರ್ಕ್ಸು ಬೃಹದ್ ತಾತ್ವಿಕತೆಯನ್ನು ಸರಳವಾಗಿ ಹೊಸೆದದ್ದಕ್ಕೆ.

ಮೌನ ವೀಣೆ ಹೇಳಿದರು...

chennagide.

manoja hande ಹೇಳಿದರು...

Guruve Neenyaru??