ಗುರುವಾರ, ಮಾರ್ಚ್ 1, 2018

ಚಂದಮಾಮ



ಕನಸುಗಳ ಬಿತ್ತುತ್ತ
ನಭವೆಲ್ಲ ಬೆಳೆಯುತ್ತ
ಬಂದಿಹನು ಚಂದಮಾಮ

ಯಾರು ಕೇಳದ ಕಾಡು
ಎಂದೂ ಮರೆಯದ ಹಾಡು
ತಂದಿರುವ ಚಂದಮಾಮ

ಅಪ್ಪ ಮೊದಲಿಗೆ ಕೊಟ್ಟ
ಹೊಳೆವ ನಾಣ್ಯದ ನೆನಪು
ತಂದಿರುವ ಚಂದಮಾಮ

ಕರೆದ ನೊರೆಹಾಲನ್ನು
ಅಮ್ಮ ಕುಡಿಸಿದ ಹಾಗೆ
ನಗುತಿರುವ ಚಂದಮಾಮ

ಮೈಮರೆತ ನಿದ್ದೆಯಲೂ
ಕನಸುಗಳ ಜಾಗರದಲೂ
ಸಹಪಯಣಿಗ ಚಂದಮಾಮ

ಊರು ಸೂರುಗಳಾಚೆ
ಮಾತು ಮೌನಗಳಾಚೆ
ಕಬ್ಬಿಗನು ಚಂದಮಾಮ

2 ಕಾಮೆಂಟ್‌ಗಳು:

sunaath ಹೇಳಿದರು...

‘ಚಂದಮಾಮ’ ಕವನವು ಚಂದ್ರನ ಬೆಳದಿಂಗಳಿನಂತೆಯೆ ಸೊಗಸಾಗಿದೆ.

Nuthan H B ಹೇಳಿದರು...

Thank you ಕಾಕ