ಭಾನುವಾರ, ಫೆಬ್ರವರಿ 12, 2012

ಕನಸಿನ ಕಡಲು

ಕನಸಿನ ಕಡಲಲ್ಲಿ
ಕಡಲ ಕನಸುಗಳಿವೆ
ಮರುಳು ಮನದಲ್ಲಿ
ಮರಳ ಹರಳುಗಳಿವೆ

ಹನಿಗಳಾಗಿ ಹುಟ್ಟಿ
ತೊರೆಗಳಾಗಿ ಹರಿದು
ನದಿಗಳಾಗಿ ಝರಿದು
ಭೋರ್ಗರೆಯುತ್ತಲಿದೆ
ಅವಿರತ ಭಾವದುನ್ಮಾದ

ಕಡಲ ಕಡಗೋಲಿನಲಿ
ಮತ್ತೆ ಧ್ಯಾನಕೆ ಸಿಲುಕಿ
ಊರ್ಧ್ವಮುಖಿಯಾಗಿದೆ
ಅರಿಯದಂತ ನಾದ

3 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಕಡಲ ಪ್ರತಿಮೆಗೆ ತಕ್ಕುದಾದ ಕವನ ರಚನೆ.

ಭಾವ ತೀವ್ರತೆ ಮತ್ತು ಭಾಷಾ ಸರಳ ಬಳಕೆ ನಿಮ್ಮ ಹಿರಿಮೆ.

ನನ್ನ ಬ್ಲಾಗಿಗೂ ಸ್ವಾಗತ.

ನೂತನ ಹೇಳಿದರು...

DhanyavadagaLu badarinathare :)

prashasti ಹೇಳಿದರು...

ಸೂಪರ್ ಸರ್.. ವರ್ಷಕ್ಕೆ ಒಂದೇ ಕವನ ಬರ್ಯೋದಾ ಹೇಗೆ ನೀವು ? !!
ಅಮೀರ್ ಖಾನಿನ ವರ್ಷಕ್ಕೆ ಒಂದೇ ಸಿನಿಮಾ ಎಂಬಂತೆ.. ಸುಮ್ನೇ ತಮಾಷೆಗೆ ಹೇಳಿದೆ.. ಚೆನ್ನಾಗಿ ಬರೀತೀರ ಸರ್ :-)