
ನಾ ಮಲ್ಲಿಗೆ ಮಾಲಿ ..ಹಾಂ.. ಇದು ಮಾಗಿ
ಹಾಲುಹಾದಿ ನಿನ್ನ ಹೆರಳು
ಇಲ್ಲೆಲ್ಲಿದೆ ನೆರಳು
ಗಾಳಿಯ ಮಿಡಿದಿದೆ ಬೆರಳು..
ಸುರಗಿಯ ಬೆರಗು ದಿನಬೆಳಗೂ
ನಾಗನ ನಡೆ ನಿನ್ನಯ ಜಡೆ
ಸರಿದಿದೆ ಯಾವೆಡೆ...
ಕಾಡೆ ಗೂಡೆ
ಬಿರಿದು ಜರಿಯುತಿದೆ ಕಾವಿನ ಗೋಡೆ...
ಗಂಧದ ಕನಸಲಿ ಚಳಿಬಿಟ್ಟಿಲ್ಲ
ಬಿಸಿಲು ಎಬ್ಬಿಸಿದೆ ಸ್ನಾನವೆ ಇಲ್ಲ
ದಿನ ಓಡುತಲಿದೆ
ಬೆಳಕೆಲ್ಲಿದೆ
ಮುಗುಳರಳು ಕಾಣದೆ ಇನ್ನೂ ಕತ್ತಲೆ
3 ಕಾಮೆಂಟ್ಗಳು:
ವಾರೇವ್ಹಾ.. ನೀಳ ಜಡೆಗೂ ಉದ್ದ ನಾಗಪ್ಪನಿಗೂ ಸಾಟಿಯೇ ಸಾಟಿ. ಎಂತಹ ರಸಿಕ ಮನದ ಕವಿ ನೀವು!
ಪದ ಬಳಕೆಯಲ್ಲೂ ಪುಳಕವನ್ನು ಬೆಸುಗೆಯಾಗಿಸಿದ ನಿಮ್ಮ ಕವಿ ಚಾಣಾಕ್ಷತೆಗೆ ನಾವು ಶರಣು.
ಕತ್ತಲೆಯೇ ಬೇಕು
ಕನಸಿಗೆ ಕತ್ತಲೆಯೇ ಬೇಕು!
ಬನಗಳನ್ನು ಕಡಿಯಲಾಗುತ್ತಿದೆ ಬದರಿಯವರೆ, ನನ್ನ ಸಂಕಟ ಯಾರಿಗೆ ಹೇಳಲಿ?
ಕನಸಿಗೂ ಕತ್ತಲೆ ಆವರಿಸುವಂತಿದೆ ... ಅಲ್ಲೂ ಒಂದು ಕನಸು ಕಾಣಬಹುದೇ ಸುನಾಥರೆ?
ಕಾಮೆಂಟ್ ಪೋಸ್ಟ್ ಮಾಡಿ