ಗುರುವಾರ, ಸೆಪ್ಟೆಂಬರ್ 4, 2014

ನೆರೆ

ಖಾಲಿಯಿದ್ದ ಮನಸ್ಸಿನೊಳಗೆ
ಕರಿಯ ಮೋಡ ಕೂಡಿದೆ
ಮಳೆಯ ಕರೆದು ತೋಯುವಂತ
ತುಡಿತ ಮಿಡಿದು ಹಾಡಿದೆ

ಕಾಣದಂತೆ ಕತ್ತಲನ್ನು
ತಬ್ಬಿಕೊಂಡು ಕರಗಲೇ
ಮಿಂಚು ಬೆಳಕಿನಲ್ಲಿ
ನಿನ್ನ ನಗುವ ಹುಡುಕಿ ಕೊರಗಲೆ

ಸಿಡಿಲ ರಥವ ಏರಿ ನಿನ್ನ
ಎದೆಯಗೂಡ ಸೇರಲೇ
ಹರಿವ ನೆರೆಯ ತುಂಬ ಬರಿದೆ
ದೋಣಿ ಬಿಡುತ ಹಾಡಲೆ

2 ಕಾಮೆಂಟ್‌ಗಳು:

sunaath ಹೇಳಿದರು...

ಹಾಡಿಕೊಳ್ಳಬಹುದಾದ ಭಾವಪೂರ್ಣ ಕವನ.

Badarinath Palavalli ಹೇಳಿದರು...

ಎಲ್ಲೋ ತೇಲಿಸುವಂತಹ ರಚನೆ.