ಶನಿವಾರ, ನವೆಂಬರ್ 16, 2013

ಬೆಳ್ಕೊಂದೈತೆ

ಏನಾಗೋದ್ರೂ ಬದ್ಕ್ಲೇಬೇಕು ಹುಟ್ಟಿದ್ದಕ್ಕೆ
ಕೈಯಲ್ಕಾಸು ಆಡ್ತಿರ್ಬೇಕು ಉಸ್ರಾಡೋಕೆ
ಭೂಮಿಲ್ಜನಾ ದಿನಾ ಸಾಯೋದ್ಕಾಸ್ಕಾಣೋಕೆ
ಬದ್ಕನ್ನೋದೇ ದಿನಾ ಚೂರ್ಚೂರ್ ಸಾಯೋದಕ್ಕೆ

ರಕ್ತಕರ್ಗಿ ಬೆವ್ರಾಗ್ ಹರ್ದ್ರೆ ರೋಗಾ ಇಲ್ಲ
ಹಂಚಿತಿನ್ನೋ ಮನ್ಸೂ ಇದ್ರೆ ಜೀವ್ನಾ ಬೆಲ್ಲ 
ದಿನಾ ಸಿಹೀ ತಿಂದ್ರೆ ಏನೂ ತಿಳಿಯೋದಿಲ್ಲ
ಬೇವಲ್ ಹೂವಾದ್ಕಾಲಕ್ಕೆಸ್ರೆ ವಸಂತ್ಕಾಲ

ಸುತ್ತಲ್ಜನ್ರ ಕಣ್ಣಲ್ ನಮ್ನಮ್ ಮುಖದ್ಬೆಳ್ಕು
ಕಾಣೋದಕ್ಕೆ ಎದ್ಯೊಳ್ಗೆ ಬೆಳ್ಕಿರ್ಬೇಕು
ಕಾರಿರ್ಳೂಲೂ ಕಂಗಾಲಾಗ್ದಂಗ್ನಮ್ಮೊಳ್ಗೈತೆ
ಒಳ್ಗೆ ಇಳ್ದು ನೋಡ್ತಾ ಇದ್ರೆ ಮಾತಾಡ್ತೈತೆ.

2 ಕಾಮೆಂಟ್‌ಗಳು:

sunaath ಹೇಳಿದರು...

ಮೂರೇ ಮಾತ್ನಲ್ಲಿ ತಿಳ್ಸಿಬಿಟ್ಟೀರಿ
ಬದುಕೋ ಧರ್ಮ
ಈ ಅಕ್ಸರಗಳಲಿ ಅಡಗಿಹುದಣ್ಣಾ
ಜೀವನ ಮರ್ಮ

ಅನಾಮಧೇಯ ಹೇಳಿದರು...

ತುಂಬಾ ಚೆನ್ನಾಗಿದೆ

http://mounakanive.blogspot.com/2013/07/blog-post_22.html