ಗುರುವಾರ, ಡಿಸೆಂಬರ್ 12, 2013

ನೊಗದ ನೆಲೆ

ಬೆವರಾಗಿ ರಕ್ತ
ಸಾವಿರದ ಅನ್ನ
ಮುಡಿಪಾದ ತನ್ನತನ
ದಿನವೂ
ಬದುಕುವ ಸಾವೆಂಬ ಆಟ
ಸಾಯುವ ನೋವಿನೋಟ
ಬೆಳೆ ಕಳೆಗಳ
ಮಧ್ಯೆ
ನೊಗದ ಸಾಗಾಟ
ತಪದಿ ಗಳಿಸಿದ
ಅಗುಳು
ಗಂಟಲಿಳಿಯದಷ್ಟು ಋಣ
ಬೆಳಕಾಗದಿದ್ದರೂ ಬೆಳೆಗೆ
ಕೊನೆಗೆ ಕೊಳೆತು
ಗೊಬ್ಬರವಾದರೂ
ಆಗಬೇಕು
ನೊಗದ ನೋವಿಗೆ
ಈಡಾಗಲೇ ಬೇಕು

http://www.youtube.com/watch?v=jj5RGLjF-tM





2 ಕಾಮೆಂಟ್‌ಗಳು:

sunaath ಹೇಳಿದರು...

ಶ್ರೀಮಂತರಿಗಾಗಿ ಶ್ರೀಮಂತರು ಆಳುತ್ತಿರುವ ಬಡರಾಷ್ಟ್ರ ನಮ್ಮದು. ಟೀವಿ ಚಾನೆಲ್ಲುಗಳಲ್ಲಿ slum clearance ತೋರಿಸುತ್ತಿರುವಾಗಲೂ ಸಹ ಇಂತಹ ಕರಳು ಹಿಂಡುವ ನೋಟಗಳನ್ನು ಕಾಣಬಹುದು.

ನೂತನ ಹೇಳಿದರು...

ಸತ್ಯ ಸುನಾಥರವರೆ, ಅನ್ನದಲ್ಲಿ ಮಣ್ಣು ಕಲಸುವ ಕರ್ಮದ ಶಾಪಕ್ಕೆ ಒಂದು ಜನಾಂಗವೇ ಬಲಿಯಾಗಬೇಕಾದ ಅಪಾಯದ ಅಂಚಿನ ಕಾಲಘಟ್ಟದಲ್ಲಿದ್ದರೂ ಅದರ ಅರಿವಿಲ್ಲದೇ ಮೆರೆಯುವ ಮಂದಿಗೆ ಏನೆಂದರೂ ವ್ಯರ್ಥವೇ!