ಸೋಮವಾರ, ಫೆಬ್ರವರಿ 29, 2016

ನಗೆಹೂ ಹಾಡುನಿನ್ನ ದನಿಯಲದ್ದಿತೆಗೆದ
ಹಾಡಲೆಂತ ಸೊಗವಿದೆ

ಬಿರಿವ ಕನಸ
ಕಂಡ ಸುಮಕೆ
ಭ್ರಮರ ತಂದ ಜಗವಿದೆ

ತಂಬೆಳನು
ತುಂಬಿತಂದ
ಚಂದಮನಲೂ ಕೊರಗಿದೆ

ಹಾಡನೆಣಸಿ
ದೂರನಿಂತು
ಮರುಗುವಂತ ಸೊಗಸಿದೆ

ಬಾಯಾರಿದ
ಮನಕುಲುಮೆಯ
ತಣಿಸಲೊಂದು ಹಾಡಿದೆ

ನಗೆಹೂವದು
ಬೀರಿದ ಘಮ
ಬಾಡದಂತೆ ತುಂಬಿದೆಕಾಮೆಂಟ್‌ಗಳಿಲ್ಲ: