ಭಾನುವಾರ, ಏಪ್ರಿಲ್ 10, 2016

ನನ್ನದೇ!?ಮಣ್ಣಿದು ನನ್ನದಲ್ಲ
ದುಡಿಮೆಯ ಹಸಿವು ನನ್ನದೇ

ನೀರದು ನನ್ನದಲ್ಲ
ದಾಹದ ದಣಿವು ನನ್ನದೇ

ಗಾಳಿಯು ನನ್ನದಲ್ಲ
ಉಸಿರಿನ ತವಕ ನನ್ನದೇ

ಬೆಳಕದು ನನ್ನದಲ್ಲ
ಬೆಳಗುವ ಕಣ್ಣು ನನ್ನದೇ

ಗಗನವು ನನ್ನದಲ್ಲ
ಹರಡಿದ ಕನಸು ನನ್ನದೇ

ತನುವಿದು ನನ್ನದಲ್ಲ
ತರಚು ಗಾಯ ನನ್ನದೇ

ಮನವಿದು ನನ್ನದಲ್ಲ
ಮಾಯದ ನೋವು ನನ್ನದೇ

ಹೂವದು ನನ್ನದಲ್ಲ
ನಗುವಿನ ನಲಿವು ನನ್ನದೇ

ರಂಗವು ನನ್ನದಲ್ಲ
ನಾಥನ ಪಾದ ನನ್ನದೇ

1 ಕಾಮೆಂಟ್‌:

sunaath ಹೇಳಿದರು...

ಇದು ನೀವು ಬರೆದ ಕವನ, ನನ್ನದಲ್ಲ. ಆದರೆ ಓದುತ್ತಿದ್ದಂತೆ, ನಿಮ್ಮ ಭಾವನೆಗಳು ನನ್ನಲ್ಲಿಯೂ ಹುಟ್ಟಿ, ಕವನ ನನ್ನದೂ ಆಯಿತು!