ಬುಧವಾರ, ಜನವರಿ 20, 2010

ಬಾಲಿಶ

ಕಾಣದ ಜತೆಗಾರ
ಕಾಡುವ ಜಲಗಾರ
ಕಡಲ ತಳಮಳವಾವುದೋಕಂಗಳ ಕಲೆಗಾರ
ನದಿಗಳ ನೇಕಾರ
ಹರಿವ ಹಂಬಲವೇನದೋ

ನೇಸರನ ನಗಿಸುವನೆ
ಕೂಸುಗಳ ಅಳಿಸುವನೆ
ಸೂಸಿದ ಸೊಬಗೆಂಥದೋ

ಒಳಗೆಲ್ಲ ಆಡುತ್ತ
ಹೊರಗೆಲ್ಲ ಕಾಡುತ್ತ
ಜರಗುವ ಪರಿ ಎಂಥದೋ

ಕಾಮೆಂಟ್‌ಗಳಿಲ್ಲ: