ಮಂಗಳವಾರ, ಸೆಪ್ಟೆಂಬರ್ 1, 2015

ಮನದ ಒಗಟುಏನು
ಹಾಡುತಿರುವೆ
ಮನವೇ ನನಗೆ
ಚೂರೂ
ತಿಳಿಯುತಿಲ್ಲ

ತಂತಿಯಲ್ಲಿ
ಮಿಡಿದ ರಾಗ
ಬುರುಡೆ ಸೇರುತಿಲ್ಲ

ನಗುವ ಹೂವ
ದಾಟಿ ಮುಂದೆ
ಜಗವು ಕಾಣುತಿಲ್ಲ

ನನ್ನ ದೃಷ್ಟಿತಾಕಿ
ಸೊರಗದಂತೆ
ಕಾಯತಿಳಿಯುತಿಲ್ಲ

ಬಾಡದಂತೆ
ನೋಯದಂತೆ
 ಹೂವ ನಗೆಯ
ತುಂಬಿ ಒಯ್ಯಬೇಕು

ಅರವಿಂದಮುಖನ
ಪಾದಪದುಮದಲ್ಲಿ
ಕರಗಬೇಕು

🌷🌷🌷🌷🌷🌷🌷🌷🌷

1 ಕಾಮೆಂಟ್‌:

sunaath ಹೇಳಿದರು...

ಸರಳವಾದ ಕವನವೊಂದು ಎಷ್ಟು ಭಾವಪೂರಿತವಾಗಿ ಇರಬಲ್ಲದು ಎನ್ನುವುದಕ್ಕೆ ನಿಮ್ಮ ಈ ಕವನವೇ ಸಾಕ್ಷಿಯಾಗಿದೆ.