ಮಂಗಳವಾರ, ನವೆಂಬರ್ 10, 2015

ಸಂಧ್ಯಾವಂದನೆಎದೆ ಗೂಡ
ಹಕ್ಕಿಗೆ
ಹಾಲು ನೀರಲ್ಲ
ಬೆಳಕ ಕೊಡು
ಹಾರಲು ರೆಕ್ಕೆಯಿದೆ
ಗೂಡಬಾಗಿಲ
ತೆರೆದಿಡು
ಬಾನು ಬಯಲ
ಚಾಚಿದೆ
ಬೆಳಕಿನ ಹಣ್ಣಿನ
ಹಸಿವ ಕೊಡು
ಹೊನ್ನಿನರಮನೆ ಮೋಹ
ಕಾಡದಿರಲಿ
ಬೇಡ ಕಾಡುವ
ಬಲೆಯು ತಾಕದಿರಲಿ
ಬೇಕು ಹಲವುಗಳು
ತಾಕಿ ಸಾಯದಿರಲಿ
ನಿನ್ನ ನಗೆ ಬೆಳಕಿನೊಳಗೆ
ಹಕ್ಕಿ
ತತ್ತಿಯಿಡಲಿ
ಗುರುವೇ
ಹಾರಿಬಿಡು

1 ಕಾಮೆಂಟ್‌:

sunaath ಹೇಳಿದರು...

ಹೌದು. ಹಕ್ಕಿಯನ್ನು ಹಾರ ಬಿಡುವುದೇ ನಿಜವಾದ ಸಂಧ್ಯಾವಂದನೆ. ಕವನ ಸುಂದರವಾಗಿದೆ.