ಭಾನುವಾರ, ನವೆಂಬರ್ 22, 2015

ಚಿರನಿಯಮ

ನೋಡಿರುವೆ
ಗತಕಾಲದಿಂದಲೂ
ಚರಿತ್ರೆಯ ಪುಟಗಳಲ್ಲಿ
ಪಟ್ಟಾಭಿಷೇಕವಾಗಿ
ಮೆರೆದವರ
ಗೆದ್ದವರ ಹಿಂದಿನ
ಹೊಗಳುಭಟ್ಟರ
ಸೋತವರ ತುಳಿದ
ನೀಚ ಭೃಷ್ಟರ
ಯಾವುದೂ
ಚಿರವಲ್ಲ ಧರೆಯಲಿ
ಇಂದಿಗೂ ನೋಡುತ್ತಿರುವೆ
ಅವರವರ ಪಾತ್ರದಲ್ಲಿ
ಅವರವರು...
ಭಿಡೆ ಬಿಟ್ಟು
ಭಾಗವತನ ತಾಳಕ್ಕೆ
ಹೆಜ್ಜೆ ಇಡುವುದೇ
ಚಿರನಿಯಮ

1 ಕಾಮೆಂಟ್‌:

sunaath ಹೇಳಿದರು...

‘ಭಾಗವತನ ತಾಳಕ್ಕೆ ಹೆಜ್ಜೆ ಇಡುವುದೇ ಚಿರನಿಯಮ’. ಹೌದು, ಇದೇ ಶಾಶ್ವತ ಸತ್ಯ!